09 August 2012

ವೇಣುಲೋಲನ ನಮಿಸುತ್ತಾ...



ಆ ಮುರಲಿಯಲ್ಲದೇನು ಮೋಡಿಯಿಹುದೋ...
ಆ ವೇಣುಗಾನದ ನಾದವದೇನು ಮಾಯೆ ಮಾಡಿಹುದೋ...
ಆ ಕೊಳಲ ಕೊರಳಲ್ಲದ್ಯಾವ ಕೋಗಿಲೆಯಿಹುದೋ...
ಅದ ಕೇಳುತ್ತಿದ್ದರೆ ಮನವಿದು ಮಿಡಿಯದಿರದು...
ಎದ್ದೆದ್ದುಬರುವ ತಲ್ಲಣಗಳೆಲ್ಲ ಅಲ್ಲೇ ಸ್ತಬ್ಧವಾಗಿಬಿಡುವವು...
ಇಂತಿರಲು,
ಆ ಅಸದಳ ನಾದದೊಡೆಯ ಶ್ರೀಕೃಷ್ಣನ ಸಾನ್ನಿಧ್ಯ ಇನ್ನೆಷ್ಟು ಹಿತವಿರಬಹುದು...
ಅವನೊಲುಮೆಯ ಕೃಪಾಕಟಾಕ್ಷದ ಮುಂದೆ ಕಷ್ಟಗಳೆಲ್ಲ ಕರಗಿಹೋದಾವು...
ಸಮ್ಮೋಹನಗೊಳಿಸುವ ಮೋಹನಗಾನಪ್ರಿಯನ ಈ ಜನುಮದಿನ...
ವಿನೀತರಾಗಿ ಆತನ ಆಶೀರ್ವಾದ ಬೇಡೋಣ...

1 comment:

  1. ನಮಸ್ತೆ ಮೇಡಮ್. ಚಂದ ಉಂಟು ನಿಮ್ ಬ್ಲಾಗ್. ಚಂದ ಬರೀತೀರಿ. ನಿಮ್ಮ ಒಡನಾಟ ನಮಗೆ ದಕ್ಕಬಹುದೇ..?
    -ಸಹ್ಯಾದ್ರಿ ನಾಗರಾಜ್
    (sahyadri.nagaraj@gmail.com/8722631300)

    ReplyDelete