'ನಾನು ಹೀಗೇನೇ' ಅಂದ್ರೆ ಅದು ಒಂದು ಪರಿಸರಕ್ಕೆ ಅಥವಾ ಒಬ್ಬ ವ್ಯಕ್ತಿಯ ದೃಷ್ಟಿಯಲ್ಲಿ ಸರಿಯಾದೀತಷ್ಟೆ.
ಹಾಗಂತ ಅಲ್ಲೊಂದು ರೀತಿ, ಇಲ್ಲೊಂದು ರೀತಿ ನಡ್ಕೊಳ್ಳುವವಳಲ್ಲ. ನನ್ನ ವ್ಯಕ್ತಿತ್ವ ಬದಲಾಗದಿದ್ರೂ, ನಾನು ವ್ಯವಹರಿಸುವ ಜನರು ಬದಲಾಗ್ತಿರ್ತಾರಲ್ವ...
ಅವರವರು ತಮಗೆ ಬೇಕಾದಂತೆ ನನ್ನ ಚಿತ್ರಣವನ್ನು ಬರ್ಕೊಂಡಿರ್ತಾರೆ. ಖಂಡಿತ ನಿಮ್ಗೂ ಇದೆ ಆ ಸ್ವಾತಂತ್ರ್ಯ.
ಬನ್ನಿ, ನನ್ನ ಧ್ವನಿಗೆ ಕಿವಿಗೊಟ್ಟು, ನೀವೂ ಧ್ವನಿಯಾಗಿ...
ಚನ್ನಾಗಿ ಮೂಡಿ ಬಂದಿದೆ.. ಅನುಸ್ವರ ಮುಖಾಂತರ ಮನಸ್ಸಿಗೆ ವಿಚಾರ ತಲುಪವಂತಾಗಲಿ. ನಿಮ್ಮ ಅನುಭವಗಳಲ್ಲದೇ, ಇನ್ನೊಬ್ಬರ ಅನುಭವಗಳಿಗೆ ಒಂದು ತಾಣವಾಗಲಿ.. ಜೀವನದಲ್ಲಿ ಆಗುಹೋಗುಗಳಿಗೆ ಸ್ವರವಾಗಲಿ.. ಆ ಸ್ವರ ನಮ್ಮೆಲ್ಲರ ಕಿವಿಗಳಿಗೆ ಆಗಾಗ ಕೇಳಿಸುವಂತಾಗಲಿ, ಆಗ ಪ್ರಯತ್ನ ಸಾಕಾರಗೊಂಡೀತು...
ReplyDeleteanushree tumba laiku baretta idde.enage tumba kushi aatu hange open madi odide.ninna anusvara ellarallu anuranisali.good luck.
ReplyDeleteನಿಮ್ಮ ಧ್ವನಿಯನ್ನು ಕೇಳುತ್ತೇನೆ. ನೀವು ನಿಮ್ಮ ಬ್ಲಾಗನ್ನು ನಿಮ್ಮ ಧ್ವನಿ ಎಂದು ಅರ್ಥೈಸಿರುವುದನ್ನು ಸಂತೋಷದ ಸಂಗತಿ. ನಾನೂ ಸಹ ನನ್ನ ಬ್ಲಾಗನ್ನು ನನ್ನ ಧ್ವನಿ ಎಂದೇ ನಂಬಿದ್ದೇನೆ. ನಿಮ್ಮದು ಅನು'ದನಿ'. ನನ್ನದು ಕಣ್ಠೀ'ರವ'.
ReplyDelete