"ನಂಗೊಂದು ಪೆನ್ನು ತರ್ತೀನಂತ ಹೇಳಿದ್ದೆ. . ತಂದ್ಯಾ ಅಮ್ಮ. . ?"
"ನಂಗೆ ನಿನ್ನಲ್ಲಿರೋ ಹಳೇ ಹಾಡುಗಳನ್ನು ಕೊಡ್ತೀನಂತ ಹೇಳಿದ್ದೆ. . . ತಂದ್ಯೇನೆ. . ?"
"ಮೊನ್ನೆ ಪತ್ರಿಕೇನಲ್ಲಿ ನನ್ನ ಲೇಖನ ಬಂದಿತ್ತೂಂದ್ನಲ್ಲ. . ಓದಿದ್ರಾ. .?"
- ಇವೆಲ್ಲ ನಮ್ಮ ಪ್ರೀತಿಪಾತ್ರರು ಪ್ರೀತಿಯಿಂದ ಕೇಳುವ, ಕೇಳಿದಷ್ಟೂ ಬಾರಿ ನಾವು "ಅಯ್ಯೋ ಮರ್ತೇ ಹೋಯ್ತು. . " ಅಂತ ಉತ್ತರಿಸೋ ಸಾಮಾನ್ಯ ಪ್ರಶ್ನೆಗಳು.
ನಾವು ಯಾರ್‍ಯಾರದ್ದೋ ಕೆಲಸಗಳನ್ನು ಮಾಡಿಕೊಡ್ತೇವೆ, ಯಾವ್ಯಾವುದನ್ನೋ ಸರಿಯಾಗಿ ನೆನಪಿಟ್ಟು ಎಚ್ಚರವಹಿಸಿ ಮಾಡಿಪೂರೈಸ್ತೇವೆ. ಆದ್ರೆ. . . ನಮ್ಮವರ ಪ್ರೀತಿಯ ಪುಟ್ಟ ಪುಟ್ಟ ಆಸೆಗಳನ್ನು ಪೂರೈಸೋದಕ್ಕೆ ಮರೆತೇ ಬಿಡ್ತೇವೆ.
ಅದೆಂಥಾ ನಿರ್ಲಕ್ಷ್ಯವೋ ದೇವರೇ ಬಲ್ಲ. ಅಥವಾ ಅವರೆಲ್ಲಾ ನಮ್ಮವರೇ ತಾನೇ. . ಇವತ್ತಲ್ಲದಿದ್ರೆ ನಾಳೆ ಮಾಡಿದ್ರಾಯ್ತು. . ನಾಳೆ ನೆನಪಾದೀತು. . ಎಂಬ ಭಾವವೋ. . ಅಂತೂ ಕಾಯ್ತಾ ಕೂತವರು ಕಾದೇ ಬಾಕಿ.
ನಾವು ಎಷ್ಟೇ ಕಾಯ್ಸಿದ್ರೂ ಆ ಸುಂದರ ಅನುಬಂಧದಲ್ಲಿ ಎಳ್ಳಷ್ಟೂ ಬಿರುಕು ಬರದು ನೋಡಿ, ಅದು ಮೆಚ್ಚುವಂಥದ್ದು ಅಲ್ವ? ನಾಳೆ ಮತ್ತೆ ಅಷ್ಟೇ ಪ್ರೀತಿಯಿಂದ ಅದೇ ಪ್ರಶ್ನೆಗಳು ಎದುರಾಗುತ್ತವೆ. ನಿರಾಸೆಯಾದರೂ ತೋರ್ಪಡಿಸದೆ ಒಂದು ನಿಡಿದಾದ ಉಸಿರಲ್ಲಿ ವಿಷಯಕ್ಕೆ ಪೂರ್ಣವಿರಾಮ ಹಾಕಿಬಿಡುತ್ತಾರೆ. ಬೇರೆ ಏನೆಲ್ಲ ಸಮಸ್ಯೆಗಳಿವೆಯೋ ಏನೋ. . ಇರ್ಲಿ. . ನೆನಪಾದೀತು ಒಂದು ದಿನ. . ಎಂಬ ಸಮಾಧಾನ ತನ್ನಷ್ಟಕ್ಕೇ ಬಂದುಬಿಡುತ್ತದೆ.
ಅಂತಹ ಒಂದು understanding ನಿಂದಲೇ ತಾನೆ, ಈ ಜೀವನ ಸುಗಮವಾಗಿ ನಡೀತಿರೋದು. . ?
This comment has been removed by the author.
ReplyDeleteಕೆಲಸದ ನಂತ್ರ ಎಲ್ರೂ ತಮ್ ತಮ್ ಹೊಟ್ಟೆ ತುಂಬುಸ್ಕೊಂಡು ನಮ್ಮನ್ನ ಮರ್ತೇ ಬಿಡ್ತಾರೆ . ನಮ್ದು ಮತ್ತದೇ ಹಳೇ ಗೋಳು. ಅನ್ನಂಗಿಲ್ಲ, ಬಿಡಂಗಿಲ್ಲ. ಈ ಸಲನಾದ್ರೂ ಯಾರಾದ್ರೂ ಏನಾದ್ರೂ ಉದ್ಧಾರ ಮಾಡ್ಬೋದು ಅಂತ ಕಾಯ್ತಾ ಇರೋ ಹಾಗಿದೆ ನಿಮ್ಮಾತು. ನಿಮ್ಮ ಪ್ರಯತ್ನ ಅಭಿನಂದಾರ್ಹ..
ReplyDeleteಅನುಸ್ವರ ಅನುಸ್ವಾರದಂತೆ ಮುಂದುವರಿಯಲಿ ....
ಶುಭವಾಗಲಿ......
ಗಣೇಶ್ ಭಟ್ ಮಾಡಾವು....
.
.