03 February 2010

ನಿಲ್ಲು ಸೋದರಿ...ಇಲ್ಲೊಮ್ಮೆ ಕೇಳು

[ಲವ್ ಜಿಹಾದೆಂಬ ಮಾಯಾವಿಯ ಹಿಂದೆ ಓಡಿಹೋಗುವ ಮುನ್ನ...] ಒಂಭತ್ತು ತಿಂಗಳು ಬಂದೆಲ್ಲ ನೋವನ್ನು ನುಂಗಿಕೊಂಡು, ತನ್ನ ಹೊಟ್ಟೆಯೊಳಗೆ ನಾಜೂಕಾಗಿ ನಿನ್ನ ರಕ್ಷಿಸಿ, ಮತ್ತೊಂದಷ್ಟು ನೋವನನುಭವಿಸಿ ಜನ್ಮನೀಡಿದಳು ಅಮ್ಮ. ಮತ್ತೆ ಮತ್ತಷ್ಟು ಪ್ರೀತಿ ವಾತ್ಸಲ್ಯದಿಂದೊಡಗೂಡಿದ ಸಮೃದ್ಧ ಪೋಷಣೆ ನೀಡಿ ಪಾಲಿಸಿದಳು ಅಮ್ಮ. ಅಷ್ಟೇ ಮಮತೆಯಿಂದ ಬೇಕಾದ್ದೆಲ್ಲ ತಂದುಕೊಟ್ಟು ಮಗಳು ಖುಷಿಯಾಗಿರ್ಲಿ ಅಂತ ನೋಡಿಕೊಂಡರು ಅಪ್ಪ. ಮಗಳು ತುಂಬಾ ಓದ್ಬೇಕು, ಸಮಾಜದಲ್ಲಿ ಒಳ್ಳೆ ಸ್ಥಾನ ಪಡೀಬೇಕು, ಸದಾ ಸಂತೋಷವಾಗಿರ್ಬೇಕು ಅಂತ ತಮ್ಮ ಜೀವ-ಜೀವನ ತೇದು ವಿದ್ಯೆ-ಬುದ್ಧಿ ನೀಡಿ ಬೆಳೆಸಿದ್ರು ಅದೇ ಅಪ್ಪ-ಅಮ್ಮ. ಇನ್ನೇನು ತಮ್ಮ ಶ್ರಮ ಸಾರ್ಥಕವಾಗ್ಬೇಕು, ಮಗಳಿಗೊಂದು ಉತ್ತಮ ಜೀವನ ರೂಪಿಸಿಕೊಡ್ಬೇಕು ಅಂತ ಹೊರಡ್ತಾ ಇರೋವಾಗ ಇದೆಂಥಾ ಬರಸಿಡಿಲು ಆ ಬಡಪಾಯಿಗಳ ಮೇಲೆ! ಈ ಅನುಬಂಧಗಳನ್ನೆಲ್ಲ ಕಡಿದುಕೊಂಡು ಅದ್ಯಾರೋ ಗೊತ್ತು ಗುರಿಯಿಲ್ಲದವನ ಹಿಂದೆ ನೀನು ಓಡಿಹೋದೆ ಅಂತ ಕೇಳಿದ್ರೆ ಆ ಹೃದಯಗಳಿಗೆ ಏನಾಗ್ಬೇಡ... ಅದೂ ಅಶಿಸ್ತಿನ ಪರಮಾವಧಿಯ, ನೀಚ, ತುಚ್ಛ, ಕಟುಕ, ಕೊಳಕು ಜನದ ಹಿಂದೆ... ಛಿ, ನಾಚಿಕೆಯಾಗೊಲ್ವ... ಎಲ್ಲಿ ಹೋಯ್ತು ನಮ್ಮ ಸಂಸ್ಕಾರ, ಸಂಸ್ಕೃತಿಯ ಪಾಠ? ಅದ್ಯಾವ ಅನಾಮಿಕ ಆಮಿಷ ನಿನ್ನ ಮನಸ್ಸನ್ನು ಸೆಳೆದುಕೊಂಡಿತು..? ಇಪ್ಪತ್ತು-ಇಪ್ಪತ್ತೆರಡು ವರ್ಷಗಳ ಕಾಲ ನಿನಗೆ ಒಂದಿನಿತು ಕಷ್ಟವಾಗದಂತೆ ಜೋಪಾನವಾಗಿ, ನಿನ್ನ ಖುಷಿಯಲ್ಲೇ ತಮ್ಮ ಖುಷಿ ಕಾಣುತ್ತಿದ್ದ ಹೆತ್ತವರು ಮಾಡಿದ ಪಾಪವಾದ್ರೂ ಏನು..? ಅವರಿಗ್ಯಾಕೆ ಇಂಥಾ ಘೋರ ಶಿಕ್ಷೆ? ಹೋಗೋ ಮೊದ್ಲು ಸ್ವಲ್ಪ ಯೋಚಿಸ್ಬೇಕಲ್ವ... ಮುಂದೆ ನಿನ್ನ ಮಗಳೂ ಹೀಗೇ ಮಾಡಿದ್ರೆ ಹೇಗಾದೀತು..? ಒಮ್ಮೆ ಕಲ್ಪಿಸ್ಕೋ ಪ್ಲೀಸ್...

ಫಾರಿನ್ ಸೆಂಟಿನ ಪರಿಮಳದ ಹಿಂದಿರುವ ನರಕದ ಬಗೆಗೆ ತಿಳಿದುಕೊಳ್ಳುವಷ್ಟು ಪ್ರಜ್ಞೆ ನಿನ್ನಲ್ಲಿದೆ ತಾನೆ..? ಡುರ್ರೆ೦ದು ಬರುವ ಯಾರದೋ ಬಾಡಿಗೆ ಮೋಟರ್ ಸೈಕಲ್ ಮೇಲೆ ನಿನ್ನ ಜೀವನ ಅದೆಷ್ಟು ದಿನ ಸುಗಮವಾಗಿ ಸಾಗೀತು..? ಮನೆ ತಲುಪೋವಾಗ ಎಷ್ಟೇ ತಡವಾದ್ರೂ ನಿನ್ ಜೊತೇನೇ ಊಟ ಮಾಡೋಕಂತ ಕಾಯ್ತಿದ್ದ ಅಮ್ಮ ಈಗ ಏನ್ ಮಾಡ್ಬೇಕು..? ನಿನ್ನ ಕಾಣದ ಅವಳಿಗೆ ಒಂದು ತುತ್ತಾದ್ರೂ ಊಟ ಸೇರೀತಾ..? ಮಗಳ ಮದುವೆಗೇಂತ ಕಷ್ಟಪಟ್ಟು ಎಷ್ಟೋ ವರ್ಷಗಳಿಂದ ಬೆವರಿಳಿಸಿ ಸಂಪಾದಿಸಿ ಹಣ ಕೂಡಿಟ್ಟ ಅಪ್ಪನಿಗೆ ಇನ್ಯಾವ ಸಂಭ್ರಮವಿದೆ..?

ಪ್ಲೀಸ್...ಒಂದೇ ಒಂದ್ಸಲ ಮನಸ್ಸಿಟ್ಟು ಆಲೋಚಿಸು. ನಿಜವಾದ ಪ್ರೀತಿ ಯಾವುದು... 'ಆಕರ್ಷಣೆ'ಯ ಬೆಂಬತ್ತಿ ಹೋಗಿ ಅಮೂಲ್ಯ ಜೀವನ ಹಾಳುಮಾಡಿಕೊಳ್ತೀಯಾ... ಅಥವಾ ನಿಜವಾದ ಪ್ರೀತಿಯೊಂದಿಗಿದ್ದು, ಇಷ್ಟು ವರ್ಷ ಸಲಹಿದ್ದಕ್ಕಾಗಿ ಅವರನ್ನು ಚಂದದಿಂದ ನೋಡಿಕೊಂಡು ಜೀವನಸಾರ್ಥಕತೆಯನ್ನು ಪಡ್ಕೊಳ್ತೀಯಾ...
ನಿಲ್ಲು ಸೋದರಿ...ಇಲ್ಲೊಮ್ಮೆ ಕೇಳು...

7 comments:

 1. This comment has been removed by the author.

  ReplyDelete
 2. "ಹೋಗೋ ಮೊದ್ಲು ಸ್ವಲ್ಪ ಯೋಚಿಸ್ಬೇಕಲ್ವ... ಮುಂದೆ ನಿನ್ನ ಮಗಳೂ ಹೀಗೇ ಮಾಡಿದ್ರೆ ಹೇಗಾದೀತು..? ಒಮ್ಮೆ ಕಲ್ಪಿಸ್ಕೋ ಪ್ಲೀಸ್..."
  ಬಹಳ ಗಟ್ಟಿಯಾದ ಸಾಲು..ಲೇಖನ ಕೂಡ. ಇದು ಹುಡುಗರಿಗೂ ಅನ್ಯವವಾಗುವಂಥದ್ದು ! :)

  ReplyDelete
 3. ಯವ್ವನ ಎಂಬ ಕುದುರೆ ಸವಾರಿ ಮಾಡುವಾಗ ಜಗತ್ತೆ ಕಾಣೋದಿಲ್ಲ, ಯೋಚನೆಗಳೇ ಬರುವುದಿಲ್ಲ. ಈ ರೀತಿ ಆಗಲು ನೂರಾರು ಕಾರಣಗಳಿವೆ. ಗಟ್ಟಿಯಾದ ನಂಬಿಕೆಗಳು ಇಂದಿನ ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ.

  "ಜೀವನ ಅನ್ನೋದು ಮಜಾ ಮಾಡೋಕೆ ಇರೋದು, ಈಗ ಮಜಾ ಮಾಡದಿದ್ರೆ ಇನ್ಯಾವಾಗ ಮಾಡೊದು, ಏನಾಗೊಲ್ಲ ಯಾಕೆ ಭಯ..." ಈ ರೀತಿ ಮಾತುಗಳು ಇತ್ತೀಚೆಗೆ ವಿದ್ಯಾರ್ಥಿಗಳ ಮಾತಲ್ಲಿ ವ್ಯಕ್ತವಾಗುತ್ತಿವೆ. ಇದರಿಂದ ಅವರಿಗೆ ಆ ರೀತಿಯ ಹುಚ್ಚು ಸಾಹಸ ಮಾಡಲು ಮನಸ್ಸು ಬರ್ತಿದೆ.

  ಇಲ್ಲಿ ನಾವು ಇನ್ನೋಂದು ವಿಶೇಷ ಸಂಗತಿ ಗಮನಿಸಬೇಕು. ಹುಡುಗ ಅಥವಾ ಹುಡುಗಿಗೆ ೧೮ ವರ್ಷ್ ಆದರೆ ನಮ್ಮ ಕಾನೂನಿನಲ್ಲಿ ಅವರು ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೋಳ್ಳುವ ಹಕ್ಕು ಕೊಟ್ಟಿರೋದು ಈ ರೀತಿ ಅವಘಡಗಳಿಗೆ ಪರೋಕ್ಷವಾಗಿ ಕಾರಣವಾಗ್ತಿದೆ ಎಂದೆನಿಸುತ್ತದೆ. ೧೮ರ ನಂತರ ಏನೂ ಮಾಡಬಹುದು ಎಂದು ಅಂದುಕೊಳ್ಳುತ್ತಿದ್ದಾರೆ. ಈ ಕಾನೂನು ಸರಕಾರಿ ಕೆಲಸಗಳಿಗೆ ಸೀಮಿತವಾಗಿದ್ದರೆ ಚಂದ, ನಮ್ಮ ದೇಶದಲ್ಲಿ ಕಾನೂನು ಯವದೇ ಬಂದರೂ ಅದಕ್ಕೆ ಪರ್ಯಯ ವ್ಯವಸ್ಥೆ ಮಾಡಿಕೋಳ್ಳುತ್ತಾರೆ.

  ಇತ್ತೀಚಿನ ಸಿನೇಮಾಗಳಲ್ಲಿ ತೋರಿಸುವ ಸನ್ನಿವೇಷಗಳು, ಮಾತುಗಳು ಯುವಮನಸ್ಸುಗಳಿಗೆ ಹೊಸ ವಿಚಾರಗಳನ್ನು, ಯೋಚನೆಗಳನ್ನು ಕೊಡುತ್ತವೆ.ದೊಡ್ಡ ಪರದೆಯ ಮೇಲೆ ತೋರಿಸುವುದನ್ನೆ ಸತ್ಯ ಎಂದು ನಂಬಿ ಅನುಸರಿಸಲು ಮುಂದಾಗುವ ಯುವ ಮನಸ್ಸುಗಳು ಈ ರೀತಿ ಮೋಸದ ಜಾಲದಲ್ಲಿ ಗೊತ್ತಿಲ್ಲದೇ ಜಾರಿ ಬೀಳುತ್ತರೆ. ಗೊತ್ತಾಗುವಾಗ ಕಾಲ ಮಿಂಚಿರುತ್ತದೆ. ಆಗ ಕಾನೂನು ಮಾತಾಡಲು ಮುಂದಾಗುತ್ತಾರೆ. ಯಾಕೆಂದರೆ ಆ ಹಂತ ತಲುಪಿರುತ್ತಾರೆ. ಜೀವನದ ಆಸಕ್ತಿಯನ್ನೆ ಕಳೆದುಕೊಂಡಿರುತ್ತಾರೆ ಮತ್ತೆ ದಿನ ಕಳಿಯುವುದು ಮಾತ್ರ ಕೆಲಸ... ಅದು ಯಾವ ರೀತಿಯೂ ಅಗಬಹುದು.

  ಇನ್ನೋಂದು ಮಾತನ್ನು ಇಲ್ಲಿ ತಂದೆ-ತಯಂದಿರು ಮರೆಯಬಾರದು. ಅನೇಕ ಬಾರಿ ಮಕ್ಕಳು ಕಲಿತು ಒಳ್ಳೆಯ ಕೆಲಸಕ್ಕೆ ಸೇರಬೇಕು ಎಂದು ಎಲ್ಲ ಸೌಕರ್ಯ ಮಾಡಿ ಕೊಡುತ್ತಾ ಹೋಗುತ್ತಾರೆ. ಈ ಎಲ್ಲ ವ್ಯವಸ್ಥೆಯೋಂದಿಗೆ ಚಿಕ್ಕ ವಯಸ್ಸಿನಿಂದಲೇ ಅವರಿಗೆ ನಮ್ಮ ಒಡನಾಟ ಸಂಬಂಧ ಕೆಲವು ಬಾರಿ ನಮ್ಮಿಂದ ದೂರ ಹೋಗದಂತೆ ಮಾಡಿ ಬಿಡುತ್ತವೆ. ಎಷ್ಟೋ ಬಾರಿ ಮದುವೆ ವಿಚಾರ ಬಂದಾಗ ಇಲ್ಲಾ ನಾನು ಮದವೆ ಅಗೊಲ್ಲ, ಅಪ್ಪ ಅಮ್ಮನನ್ನು ಬಿಟ್ಟು ಎಲ್ಲೂ ಹೋಗೊಲ್ಲ ಅಂತ ಹಠ ಮಾಡಿ ಕುಳಿತುಕೋಳ್ಳುವ ಉಧಾಹರಣೆಗಳು ಸಾಕಷ್ಟಿವೆ. ಹಾಗಾಗಿ ಎರಡು ಮುಖವಾಗಿ ಯೋಚಿಸುವುದು ಒಳ್ಳೆಯದು.

  ಲೇಖನ ತುಂಬಾ ಮನಮುಟ್ಟುವಂತಿದೆ.

  ReplyDelete
 4. ಸಮಯೋಚಿತ ಬರಹ.. ಮುಂದಾಲೋಚನೆ ಇಲ್ಲದೆ ಮುಂದುವರೆಯುತ್ತಿರುವ ತಂಗಿಯರ ಕಣ್ತೆರೆಸುವಂತಹ ಮಾತುಗಳು.. ಹೀಗೆ ಮುಂದುವರೆಯಲಿ..

  ReplyDelete
 5. ತುಂಬಾ ಚೆನ್ನಾಗಿದೆ...

  ReplyDelete
 6. ಭಾವ ತುಂಬಿದ ಮಾತು; ಬರಹ!
  ಅಭಿನಂದನೆಗಳು

  ReplyDelete
 7. ಈ ಬ್ಲಾಗಿನ ಕಾನ್ಸೆಪ್ಟ್ ಮಜವಾಗಿದೆ. ನಿಮ್ಮ ಧ್ವನಿ ಅದಕ್ಕಿಂತ ಮಧುರವಾಗಿದೆ!

  - ಮಹಾಬಲ ಸೀತಾಳಭಾವಿ

  ReplyDelete