26 January 2010

ಬದಲಾವಣೆಯೊಂದಿಗೆ ಬದಲಾಗುತ್ತಾ...



ನಿತ್ಯ ಬರುವ ನಾಕಾರು forwarded ಮೆಸೇಜ್‌ಗಳು ಮನಸ್ಸಿಗೆ ಒಂದಷ್ಟು ಖುಷಿ, ನೆಮ್ಮದಿ ನೀಡ್ತವೆ. ಕೆಲವೊಂದಂತೂ ಮನಸ್ಸಿಗೆ ನಾಟಿ, ಹೊಸ ಉತ್ಸಾಹ ನೀಡ್ತವೆ, ಹೊಸ ಪ್ರೇರಣೆ ಕೊಡ್ತವೆ. ಹೀಗೇ ಗೆಳತಿಯೊಬ್ಬಳು ಕಳಿಸಿದ sms:
"Nothing can be changed by changing the face.. but, everything can be changed by facing the change."

ಹೌದಲ್ಲ! ಜೀವನದಲ್ಲಿ ಬದಲಾವಣೆಗಳು ಬಂದಾಗ ಒಮ್ಮೆಗೇ ಅದನ್ನು ಎದುರಿಸೋದಕ್ಕೆ ಮನಸ್ಸೇಕೋ ಹಿಂಜರಿಯುತ್ತೆ. ಯಾಕೆಂದ್ರೆ ನಾವು ಒಂದು mindsetಗೆ ಅಂಟಿಕೊಂಡಿರ್ತೇವೆ. ಅದು ಹಾಗೇನೇ ಆಗ್ಬೇಕು ಅಂತ ಬಲವಾಗಿ ಅಂದುಕೊಂಡಿರ್ತೇವೆ. ಹೀಗಿರೋವಾಗ ಏನಾದ್ರೂ ಸ್ವಲ್ಪ ಏರುಪೇರಾದ್ರೂ ವಿಪರೀತ ಪೇಚಾಡ್ತೇವೆ. ಆ ಬದಲಾವಣೆಗೆ ಹೊಂದಿಕೊಳ್ಳೋದಕ್ಕೆ ತುಂಬಾ ಕಷ್ಟವಾಗಿಬಿಡುತ್ತೆ. ಬೇಸರಮಾಡಿಕೊಂಡು ಮುಖಬಾಡಿಸಿಕೊಂಡು ಕೂತ್ರೆ ಏನು ಪ್ರಯೋಜನ?

ಅದ್ರ ಬದ್ಲು, ಬಂದ ಬದಲಾವಣೆಗೆ ಹೊಂದಿಕೊಂಡು ಅದಕ್ಕನುಗುಣವಾಗಿಯೇ ನಡ್ಕೊಂಡ್ರೆ ಆ ಬದಲಾವಣೆಯಲ್ಲೂ ಬದಲಾವಣೆ ತರ್ಬಹುದು. ಒಮ್ಮೆಗೇ ಆ ರೀತಿ ಬದಲಾಗುವುದು ಸ್ವಲ್ಪ ಕಷ್ಟವಾದೀತು. ಆದ್ರೂ ಪ್ರಯತ್ನಿಸ್ಬಹುದಲ್ವಾ..?

4 comments:

  1. ಅನು ಸ್ವರ
    ನಿಮ್ಮ ಬ್ಲಾಗಿಗೆ ಮೊಅದಲ ಬಾರಿಗೆ ಬಂದೆ,
    ಒಳ್ಳೆಯ ಲೇಖನ ಹಾಕಿದ್ದೀರಿ ,
    ಜೀವನವೇ ಹಾಗೆ
    ಕಷ್ಟ ಬಂದರೆ ಏನೋ ನಮಗೊಂದೇ ಬಂದಿದೆ ಆನ್ನುವ ಹಾಗೆ ಒದ್ದಾಡುತ್ತೇವೆ
    ಸುಖ ಬಂದಾಗ ಐಶ್ತೈಶ್ವರ್ಯಗಳೂ ನಮ್ಮಲ್ಲೇ ಇವೆ ಅನ್ನುವಂತೆ ಅಹಂಕಾರಿ ಆಗುತ್ತೇವೆ
    ಇವುಗಳ ನಡುವಿನ ಮನೋಭಾವ ನಮಗೆ ಇರುವುದೇ ಇಲ್ಲವೋ? ಬರುವುದೇ ಇಲ್ಲವೋ ಗೊತ್ತಿಲ್ಲ
    ಹೀಗೆಯೇ ಬರೆಯುತ್ತಿರಿ

    ReplyDelete
  2. ಹೇಗೋ ದಾರಿ ತಪ್ಪಿ ನಿಮ್ಮ ಬ್ಲಾಗಿಗೆ ಬಂದೆ. ತುಂಬಾ ಚನ್ನಾಗಿದೆ. ಭಾಷೆ, ವಿಷಯ, ಚಿಂತನೆ, ಧ್ವನಿ, ಎಲ್ಲ ಚನ್ನಾಗಿದೆ. ನನಗೆ ಯಾಕೋ ರವಿ ಬೆಳಗೆರೆಯವರ "ಮನಸೇ" CD ನೆನಪಾಯಿತು. ಹೀಗೆ ಪೇರಿಸುತ್ತಾ ಹೋಗಿ. ನೀವೂ ಒಂದು CD ಮಾಡಬಹುದು.

    ಹಿನ್ನೆಲೆ ಸಂಗೀತ ಚನ್ಆಗಿದೆ. ಆದರೆ, ಪ್ರತಿ ವಿಷಯದ ಆಯ್ಕೆಗೆ ಸರಿಯಾಗಿ ಸಂಬಂಧಪಟ್ಟ ರಾಗ ಅಳವಡಿಸಿದರೆ, ಇನ್ನಷ್ಟು effective ಆಗಬಹುದೇನೋ!.

    ಅಭಿನಂದನೆಗಳು

    ReplyDelete
  3. ನಿಮ್ಮ ಲೇಖನ ಓದುವಾಗ ನನ್ನ ತಂದೆ ಹೇಳುತ್ತಿದ್ದ ಮಾತು ನೆನಪಾಯಿತು.
    ಬದಲಾವಣೆ ಆಗದೆ ಬದುಕು ಸಾಧ್ಯ ಇಲ್ಲ. ಯಾವುದೇ ವಿಷಯಕ್ಕೆ ನಾವು ಅಂಟಿಕೊಂಡಾಗ ಆಬಗ್ಗೆ ನಮ್ಮಲ್ಲಿ ಒಂದು ರೀತಿಯ ಮೋಹ ಬೆಳೆದುಬಿದುತ್ತೆ. ಅದರಿಂದ ಪಾರಾಗಬೇಕಾದರೆ ಆ ವಿಷಯದ ಬಗ್ಗೆ ಸಣ್ಣ ಮಟ್ಟಿಗಿನ ತಾತ್ಸಾರ ಬೆಳೆಸಿಕೊಂಡರೆ ಸಾಕು. ಯಾವೊಂದು ಜವಾಬ್ದಾರಿ ನಮ್ಮ ಮೇಲೆ ಇದೆಯೋ ಅದು ಭಾಗಶಃ ಪೂರ್ಣ ಆಗುತ್ತಲೇ ಅದನ್ನ ಸಣ್ಣದಾಗಿ ವರ್ಜಿಸುತ್ತಾ ನಮ್ಮ ಮೇಲಿದ್ದ ಹೊಣೆಗಾರಿಕೆಯನ್ನ ಇನ್ನೊಬ್ಬರಿಗೆ ವರ್ಗಾಯಿಸಿ, ಅದೇ ಸಮಯಕ್ಕೆ ಹೊಸದಾದ ಕೆಲಸ ಕೈಗೆತ್ತಿಕೊಳ್ಳಿ.. ಬದಲಾವಣೆಯೂ ಖುಷಿ ಕೊಡುತ್ತದೆ...
    ಕೇಳದೇ ಇಷ್ಟೆಲಾ ಬರೆದುಬಿಟ್ಟೆ. ಕ್ಷಮಿಸಿ. ಶ್ರೀ ಕೃಷ್ಣ ಉವಾಚ... ಬೇಕಿದ್ದರೆ ತಗೊಳ್ಳಿ.
    ಧನ್ಯವಾದ.

    ಕೃಷ್ಣ.

    ReplyDelete